ಜ್ಯೋತಿಷ್ಯ ಶಾಸ್ತ್ರದಲ್ಲಿ ಅನೇಕ ವಸ್ತುಗಳ ಬಳಕೆ ಬಗ್ಗೆ ಹೇಳಲಾಗಿದೆ ,ಇದರಲ್ಲಿ ಒಂದು ಕಪ್ಪು ಎಳ್ಳು. ಇದು ಶನಿಗೆ ಸಂಬಂಧಿಸಿದ ವಸ್ತು ಪೂಜೆ ಪುನಸ್ಕಾರದಲ್ಲಿ ಇದನ್ನು ಬಳಸಲಾಗುತ್ತದೆ ಇದು ರಾಹು ಕೇತು ದೋಷವನ್ನು ತೊಡೆದು ಹಾಕುತ್ತದೆ. ಒಂದು ಲೋಟದಲ್ಲಿ ಶುದ್ಧ ನೀರಿಗೆ ಕಪ್ಪು ಎಳ್ಳನ್ನು ಹಾಕಿ
. ಈ ನೀರನ್ನು ಶಿವಲಿಂಗಕ್ಕೆ ಓಂ ನಮಃ ಶಿವಾಯ ಮಂತ್ರವನ್ನು ಜಪಿಸುತ್ತಾ ಅರ್ಪಿಸಿ. ಜಲ ಅರ್ಪಿಸಿ ನಂತರ ಬಿಲ್ವಪತ್ರೆ ಹಾಗೂ ಹೂವನ್ನು ಅರ್ಪಿಸಿ. ಕಪ್ಪು ಎಳ್ಳನ್ನು ದಾನವಾಗಿ ನೀಡಿ ಇದರಿಂದ ರಾಹು- ಕೇತು- ಶನಿಯ ಕೆಟ್ಟ ದೃಷ್ಟಿ ನಿಮ್ಮ ಮೇಲೆ ಬೀಳುವುದಿಲ್ಲ. ಕಾಳಸರ್ಪ ದೋಷ ,ಸಾಡೆಸಾತ್, ಪಿತೃದೋಷ ಎಲ್ಲ ಪರಿಹಾರವಾಗುತ್ತದೆ.
ಹಾಲಿಗೆ ಕಪ್ಪು ಎಳ್ಳನ್ನು ಬೆರೆಸಿ ಅಶ್ವತ್ಥ ಗಿಡಕ್ಕೆ ಅರ್ಪಿಸಿ ಇದರಿಂದ ಕೆಟ್ಟ ಸಮಯ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳು ಹಾಗೂ ಕಪ್ಪು ಉದ್ದನ್ನು ಕಪ್ಪು ಬಟ್ಟೆಯಲ್ಲಿ ಕಟ್ಟಿ ಬಡವರಿಗೆ ದಾನ ನೀಡಿ ಇದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಪ್ರತಿ ಶನಿವಾರ ಕಪ್ಪು ಎಳ್ಳನ್ನು ಅರ್ಪಿಸಿ ಇದರಿಂದ ಶನಿದೋಷ ದೂರವಾಗುತ್ತದೆ ವೃದ್ಧಾಪ್ಯದಲ್ಲಿ ಕಾಡುವ ರೋಗ ಕೂಡ ದೂರವಾಗುತ್ತದೆ.
ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…
source:-https://www.youtube.com/watch?v=Cr8gWSui_Mc&feature=youtu.be
Comments 0