ಬಾಂಬ್ ಬ್ಲಾಸ್ಟ್ ನಲ್ಲಿ ಎರಡು ಕೈ ಕಳೆದುಕೊಂಡರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ..!


ಜೀವನದಲ್ಲಿ ನಡೆಯುವ ಕೆಲವೊಂದು ಕೆಟ್ಟ ಸನ್ನಿವೇಶಗಳನ್ನು ಮೆಟ್ಟಿ ನಿಂತು ನಾನು ಸಮರ್ಥವಾಗಿ ಬದುಕಬಲ್ಲೆ ಅನ್ನೋದನ್ನು ಈ ಯುವತಿ ಗಿಂತ ಬೇರೆ ಯಾರು ಉತ್ತಮವಾಗಿ ಕಲಿಸಲು ಸಾಧ್ಯವಿಲ್ಲ ಅಂದ್ರೆ ತಪ್ಪಾಗಲ್ಲ. ತನ್ನ 13ನೇ ವಯಸ್ಸಿನಲ್ಲಿ ಬಾಂಬ್ ಬ್ಲಾಸ್ಟ್ ನಲ್ಲಿ ಎರಡು ಕೈ ಕಳೆದುಕೊಂಡು,ಸದ್ಯ ಮೋಟಿವೇಷನ್ ಸ್ಪೀಕರ್ ಆಗಿರುವ ಮುಂಬೈನ ಮಾಳವಿಕಾ ಅಯ್ಯರ್ ಅವರ ಸಾಧನೆಯ ಕಥೆ ಇದು. ಬಾಂಬ್ ಬ್ಲಾಸ್ಟ್ ನಲ್ಲಿ ಎರಡೂ ಕೈ ಕಳೆದುಕೊಂಡ ಮಾಳವಿಕಾ, ಅದರಿಂದ ಚೇತರಿಸಿಕೊಳ್ಳಲು ತುಂಬಾ ಸಮಯವೇ ಬೇಕಾಯಿತು. ಆದರೆ ಅವರು ಬದುಕುಳಿದಿದ್ದು ಮಾತ್ರವಲ್ಲ, ಇತರರಿಗೆ ಸ್ಫೂರ್ತಿಯಾಗುವಂತೆ ಈಗ ತಮ್ಮ ಬದುಕನ್ನೇ ಬದಲಾಯಿಸಿದ್ದಾರೆ. ಮಾಳವಿಕಾ ಬದುಕಿನ ಕಥೆಯನ್ನು ಹುಮನ್ಸ್ ಆಫ್ ಬಾಂಬೆ ಫೇಸ್ ಬುಕ್ ಪೇಜ್ ನಲ್ಲಿ ಹಂಚಿಕೊಳ್ಳಲಾಗಿದ್ದು,ಎಂಥವರಿಗೂ ಸ್ಫೂರ್ತಿಯಾಗುವಂತಿದೆ ಇರುವ ಸ್ಟೋರಿ.

ಪೋಸ್ಟ್ ನಲ್ಲಿ ಮಾಳವಿಕಾ, ತನ್ನ ಬದುಕನ್ನೇ ಬದಲಾಯಿಸಿದ ಒಂದು ಅಪಘಾತದ ಬಗ್ಗೆ ಹೇಳಿದ್ದಾರೆ. ಹತ್ತಿರದ ಯುದ್ಧ ಸಾಮಗ್ರಿಗಳ ದೀಪದಲ್ಲಿ ಬೆಂಕಿ ಅವಘಡ ಉಂಟಾಗಿ ಅದರ ತುಣುಕುಗಳು ಎಲ್ಲಾ ಕಡೆ ಬಿದ್ದು ಬಿದ್ದಿದ್ದವು. ನಮ್ಮ ಮನೆಯ ಗ್ಯಾರೇಜಿನಲ್ಲಿ ಗ್ರೇನೇಡ್ ಬಂದು ಬಿತ್ತು. ಅದನ್ನು ಹಿಡಿದುಕೊಂಡಾಗ ಸ್ಫೋಟಗೊಂಡಿತು. ಆದ್ದರಿಂದ ನನ್ನ ಎರಡೂ ಕೈಗಳನ್ನು ಕಳೆದುಕೊಂಡ ಕಾಲುಗಳಿಗೆ ತೀವ್ರ ಗಾಯಗಳಾಗಿ ನರಗಳು ಪಶ್ರುವಾಯಕ್ಕೆ ತುತ್ತಾದವು ಎಂದು ಹೇಳಿದ್ದಾರೆ. ಮೊದಲಿಗೆ ವೀಲ್ ಚೇರಿಗೆ ಸೀಮಿತರಾಗಿದ್ದ ಮಾಳವಿಕಾ ನಂತರ ಮತ್ತೆ ನಡೆದಾಡುವುದನ್ನು ಕಲಿತರು ಹಾಗೂ ಪ್ರಾಸ್ಥೆಟಿಕ್ ಕೈಗಳನ್ನು ಬಳಸುವುದು ಕಲಿತರು. ಅಂದಿನಿಂದ ಮಾಳವಿಕ ಹಿಂದೆ ತಿರುಗಿ ನೋಡಲಿಲ್ಲ. ಸಹಾಯಕರೊಬ್ಬರ ನೆರವಿನಿಂದ 10ನೇ ಕ್ಲಾಸ್ ಪರೀಕ್ಷೆ ಪೂರ್ಣಗೊಳಿಸಿದ್ದು, ನಂತರ ಸ್ಟೇಟ್ ರಾಂಕ್ ಕೂಡ ಪಡೆದರು.

Image result for malavika who lost her hands in mumbai blast

ಅನಂತರ ತನ್ನ ವಿದ್ಯಾಭ್ಯಾಸ ಮುಂದುವರಿಸಿ ಪಿ ಎಚ್ ಡಿ ಕೂಡ ಮಾಡಿದ್ರು, ಮನಸ್ಸು ಮಾಡಿದ್ರೆ ಯಾವುದೇ ಕೆಲಸ ಅಸಾಧ್ಯವಲ್ಲ ಎಂಬುದನ್ನು ಮಾಳವಿಕಾ ಸಾಬೀತು ಮಾಡಿದ್ದಾರೆ. ನಾನು ಅಪರಿಪೂರ್ಣಳು ಎಂದೆನಿಸುತ್ತಿತ್ತು. ಘಟನೆ ಬಗ್ಗೆ ಮಾತನಾಡುವುದನ್ನು ಅವಾಯ್ಡ್ ಮಾಡ್ತಿದ್ದೆ. ಈ ವೇಳೆ ನನ್ನ ಕುಟುಂಬದವರು ನನ್ನ ಜೊತೆ ನಿಂತರು ಇದೇ ವೇಳೆ ನನ್ನ ಜೀವನ ಸಂಗಾತಿಯನ್ನು ಭೇಟಿ ಮಾಡಿದೆ. ನನ್ನ ಅತ್ಯಂತ ಪರಿಪೂರ್ಣ ವ್ಯಕ್ತಿ ಎಂಬ ಎಂಬಂತೆ ಅವರು ನನ್ನನ್ನು ಕಾಣುತ್ತಿದ್ದರು. ನನ್ನ ಅಂಗವೈಕಲ್ಯ ಅವರಿಗೆ ದೊಡ್ಡ ವಿಚಾರವಾಗಿರಲಿಲ್ಲ. ಆದರೆ ನನಗೇಕೆ ಅದು ದೊಡ್ಡದೆನಿಸಿತು? ಹೀಗಾಗಿ ನಾನು ಬದುಕಿರುವುದೇ ಒಂದು ದೊಡ್ಡ ಪವಾಡ ಎಂಬುದನ್ನು ನನಗೆ ನಾನು ನೆನಪಿಸಲು ಶುರು ಮಾಡಿದೆ. ಅಪಘಾತದಿಂದ ಪಾರಾಗಿದ್ದಾನೆ. ಅಂದ್ರೆ, ನಾನು ಏನು ಬೇಕಾದರೂ ಮಾಡಬಹುದು ಎಂದು ನಂಬಲು ಶುರು ಮಾಡಿದೆ ಎಂದು ಮಾಳವಿಕಾ ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳ ಅಭದ್ರತೆ ನನ್ನ ದೇಹವನ್ನು ಮರೆ ಮಾಚುವುದು,

Image result for malavika who lost her hands in mumbai blast

ಅಪರಿಚಿತರಿಂದ ಸಾವಿರಾರು ಪ್ರಶ್ನೆಗಳನ್ನು ಎದುರಿಸಿದ ನಂತರ 2012ರಲ್ಲಿ ನನ್ನ ಅಪಘಾತದ ವಾರ್ಷಿಕೋತ್ಸವದಂದು ನಾನು ನಡೆದ ಘಟನೆಯನ್ನು ವಿವರಿಸಿದೆ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದೆ. ಆ ಪೋಸ್ಟ್ ವೈರಲ್ ಆಯಿತು ಎಂದು ಅವರು ಹೇಳಿದ್ದಾರೆ. ಟೆಡಿಕ್ಸ್ ನಲ್ಲಿ ತನ್ನ ಮೊದಲ ಭಾಷಣ ಅನಂತರ ಸಾಕಷ್ಟು ಭಾಷಣ ಹಾಗೂ ಸಾಧನೆಗಳ ಬಗ್ಗೆ ಮಾಳವಿಕಾ ಹೇಳಿಕೊಂಡಿದ್ದಾರೆ. ಕಳೆದ ವರ್ಷ ನನಗೆ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಮಾತನಾಡಲು ಆಹ್ವಾನ ಬಂದಿತ್ತು. ನವದಿಲ್ಲಿಯ ದಿವಾರ್ ಎಕನಾಮಿಕ್ಸ್ ಫೋರ್ಬ್ಸ್ ಇಂಡಿಯಾ ಎಕನಾಮಿಕ್ ಸಮಿತ್ ನಲ್ಲಿ ಪಾಲ್ಗೊಳ್ಳುವ ಅವಕಾಶವೂ ಬಂತು ಎಂದು ಅವರು ತಿಳಿಸಿದ್ದಾರೆ. ಜೀವನದಲ್ಲಿ ಸಾಕಷ್ಟು ಏರಿಳಿತಗಳಿವೆ ಎಂಬುದನ್ನು ಮಾಳವಿಕಾ ಒಪ್ಪಿಕೊಳ್ತಾರೆ. ತಡೆದುಕೊಳ್ಳಲಾಗದ ನೋವಿನಿಂದ ಎಷ್ಟೋ ದಿನ ನಾನು ಬದುಕುವುದೇ ಬೇಡ ಎಂದು ಅನ್ನಿಸಿತ್ತು. ಇಂದಿಗೂ ನಾನು ಭಾರತಕ್ಕೆ ಭೇಟಿ ನೀಡಿದಾಗ ಕೃತಕ ಕೈ ಬಳಸದಿದ್ದರೆ ತಾರತಮ್ಯ ಎದುರಿಸುತ್ತೇನೆ. ಆದ್ರೆ ನಾನು ಅದನ್ನು ಬದಲಾಯಿಸುವ ಮಾರ್ಗದಲ್ಲಿದ್ದೇನೆ. ಸದ್ಯಕ್ಕೆ ನಾನು ನನ್ನ ಮನೆಯಿಂದಲೇ ಅಡುಗೆ ಮಾಡುವುದನ್ನು ಕಲಿಯುತ್ತಿದ್ದೇನೆ ಎಂದು ಅವರು ಹೇಳ್ತಾರೆ. ನೀವು ನೀವಾಗಿರುವುದು ನಿಮ್ಮ ದೊಡ್ಡ ಶಕ್ತಿ ಎಂಬುದನ್ನು ನಾನು ಜಗತ್ತಿಗೆ ತೋರಿಸಬೇಕಿದೆ. ನನ್ನನ್ನು ನೋಡಿ ನನ್ನ ಕೈಗಳಿಲ್ಲದೆ ಪಿ ಎಚ್ ಡಿ ಮಾಡಿದ್ದೀನಿ. ಕೆಟ್ಟ ಸನ್ನಿವೇಶ ಅಥವಾ ವಿಕಲತೆಯ ಜೀವನದ ಒಂದು ಭಾಗವಷ್ಟೇ…ಅದೇ ನಿಮ್ಮ ಇಡೀ ಜೀವನದ ಕಥೆಯಲ್ಲ ನಿಮ್ಮ ಜೀವನದ ಕಥೆಯ. ಸುಖಾಂತ್ಯ ಬರೆಯುವವರು..’ನೀವು’ ಎಂದು ಮಾಳವಿಕಾ ಪೋಸ್ಟ್ ಮಾಡಿದ್ದಾರೆ.

Image result for malavika who lost her hands in mumbai blast

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=vpZJPuSayZ8&feature=youtu.be


Like it? Share with your friends!

Comments 0

Your email address will not be published. Required fields are marked *

ಬಾಂಬ್ ಬ್ಲಾಸ್ಟ್ ನಲ್ಲಿ ಎರಡು ಕೈ ಕಳೆದುಕೊಂಡರೂ ಜೀವನದಲ್ಲಿ ಗೆಲುವು ಕಂಡ ಯುವತಿಯ ಸ್ಟೋರಿ..!

log in

reset password

Back to
log in
Choose A Format
Gif
GIF format