ಶಬರಿಮಲೆ ದೇವಸ್ಥಾನದ 18 ಮೆಟ್ಟಿಲುಗಳ ಮಹತ್ವ..!ಆಶ್ಚರ್ಯಪಡುವಂತಹ ವಿಚಾರಗಳು


ಅಯ್ಯಪ್ಪ ಮಾಲೆ ಧರಿಸಿದ ಎಲ್ಲರೂ ಶಬರಿಮಲೆಯನ್ನು ಸಂದರ್ಶನ ಮಾಡಿ ಆ ಕ್ಷೇತ್ರದಲ್ಲಿ ನೆಲೆಸಿರುವ ಅಯ್ಯಪ್ಪ ಸ್ವಾಮಿಯ ದರ್ಶನ ಮಾಡಿಕೊಳ್ಳುತ್ತಾರೆ. ಆದರೆ ಇರುಮುಡಿ ಧರಿಸಿದವರು ಮಾತ್ರವಲ್ಲದೆ ಸಾಧಾರಣ ಭಕ್ತರು ಸಹ ಈ ಸಮಯದಲ್ಲಿ ದೇವರ ದರ್ಶನವನ್ನು ಪಡೆಯುತ್ತಾರೆ. ಆದರೆ ಮಾಲೆ ಧರಿಸಿ ಇರುಮುಡಿ ಕಟ್ಟಿಕೊಂಡವರಿಗೆ ಮಾತ್ರ ಪಡಿಮೆಟ್ಟಿಲು ಹತ್ತುವ ಅರ್ಹತೆ ಲಭಿಸುತ್ತದೆ. ಹದಿನೆಂಟು ಮೆಟ್ಟಿಲುಗಳು ಪಂಚ ಲೋಹಗಳ ಲೇಪನದಿಂದ ಮಾಡಲಾಗಿದೆ.ನಮ್ಮಲ್ಲಿ ತುಂಬಾ ಜನರಿಗೆ ಆ ದೇವಸ್ಥಾನದ ಹದಿನೆಂಟು ಮೆಟ್ಟಿಲು ಅಥವಾ ಪಡಿ ಮೆಟ್ಟಿಲುಗಳ ಹಿಂದೆ ಇರುವ ವಿಶೇಷತೆ ಬಗ್ಗೆ ತಿಳಿಯದು.ಒಂದನೇ ಮೆಟ್ಟಿಲು ಕಾಮ : ಈ ಮೆಟ್ಟಿಲಿಗೆ ಅದಿದೇವತೆ “ಗೀತಾದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಪೂರ್ವ ಜನ್ಮ ಸ್ಮೃತಿ ಉಂಟಾಗುತ್ತದೆ. ಹಿಂದಿನ ಜನ್ಮದಲ್ಲಿ ತಾನು ಮಾಡಿದ ಪಾಪ ಪುಣ್ಯ ಕರ್ಮದ ಜ್ಞಾನ ದೊರೆತು ಮನುಷ್ಯ ಮಾನಸಿಕವಾಗಿ ಶುದ್ದಿ ಆಗುತ್ತಾನೆ.

ಎರಡನೇ ಮೆಟ್ಟಿಲು ಕ್ರೋಧ : ಈ ಮೆಟ್ಟಿಲಿಗೆ ಅಧಿದೇವತೆ “ಗಂಗಾದೇವಿ”ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಮನುಷ್ಯನಿಗೆ ತನ್ನ ಕೋಪವೇ ತನ್ನ ಶತ್ರು ಎಂಬ ಸತ್ಯವೂ ತನ್ನ ಅರಿವಿಗೆ ಬರುತ್ತದೆ. ಅದಲ್ಲದೆ ಮನುಷ್ಯನು ತನ್ನ ದೇಹ ಮಾತ್ರವಲ್ಲದೆ ತನ್ನ ಮನಸ್ಸನ್ನು ಸಹ ಪರಿಶುದ್ಧಿ ಯಾಗಿ ಇಟ್ಟುಕೊಳ್ಳಬೇಕು ಎಂಬ ಜ್ಞಾನ ಮೂಡುತ್ತದೆ.ಮೂರನೇ ಮೆಟ್ಟಿಲು ಲೋಭ : ಈ ಮೆಟ್ಟಿಲಿಗೆ ಅಧಿದೇವತೆ ಗಾಯತ್ರಿ ದೇವಿ ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಮನುಷ್ಯನಿಗೆ ಪಿಶಾಚತತ್ವ  ನಾಶವಾಗಿ,ಒಳ್ಳೆ ಬುದ್ಧಿ ಪಡೆಯುತ್ತಾನೆ. ಅವಸರ ಕ್ಕಿಂತ ಹೆಚ್ಚಾಗಿ ಬೇಕು ಅನ್ನುವ ದುರ್ಬುದ್ಧಿ ಕೀರ್ತಿ ಗೋಸ್ಕರ ಅನ್ಯಾಯಗಳು ಸ್ವಾರ್ಥ ಭರಿತ ಕೋರಿಕೆಗಳು ನಾಶವಾಗುತ್ತದೆ.ನಾಲ್ಕನೇ ಮೆಟ್ಟಿಲು ಮೋಹ : ಈ ಮೆಟ್ಟಿಲಿಗೆ ಅಧಿದೇವತೆ “ಸೀತಾದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಜ್ಞಾನ ಯೋಗವನ್ನು ತನ್ನದಾಗಿಸಿಕೊಳ್ಳುತ್ತಾನೆ.

Image result for sabarimala ayyappa temple 18 steps

ಪ್ರತ್ಯೇಕವಾಗಿ ಒಂದು ವ್ಯಕ್ತಿಯ ಮೇಲೆ ಅನುಬಂಧ ಭಾವನೆಗಳಿಗೆ ಈ ಮೆಟ್ಟಿಲು ಪ್ರತೀಕವೆಂದು ಭಾವಿಸುತ್ತಾರೆ.ಐದನೇ ಮೆಟ್ಟಿಲು ಮದ : ಈ ಮೆಟ್ಟಿಲಿಗೆ ಅದಿತಿ ಸತ್ಯವತಿ ದೇವಿ ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಕರ್ಮ ಸನ್ಯಾಸ ಯೋಗಕ್ಕೆ ಪ್ರತೀಕ.ಆರನೇ ಮೆಟ್ಟಿಲು ಮಾತ್ಸರ್ಯ : ಈ ಮೆಟ್ಟಿಲಿಗೆ ಅಧಿದೇವತೆ “ಸರಸ್ವತಿ ದೇವಿ ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದಾನ ಫಲ ದೊರೆಯುತ್ತದೆ.ಏಳನೇ ಮೆಟ್ಟಿಲು ದಂಬ : ಈ ಮೆಟ್ಟಿಲಿಗೆ ಅಧಿದೇವತೆ  “ಬ್ರಹ್ಮ ವಿದ್ಯಾದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ವಿಜ್ಞಾನ ಯೋಗ ಧ್ಯಾನ ದೊರೆತು ಪುನರ್ಜನ್ಮ ಇರುವುದಿಲ್ಲ.ಎಂಟನೇ ಮೆಟ್ಟಿಲು ಅಹಂಕಾರ : ಈ ಮೆಟ್ಟಿಲಿಗೆ ಅಧಿದೇವತೆ “ಬ್ರಹ್ಮ ವಲ್ಲಿ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ವಾರ್ಥ ರಾಕ್ಷಸತ್ವ ನಾಶವಾಗುತ್ತದೆ.ಒಂಬತ್ತು ನೇ ಮೆಟ್ಟಿಲು ನೇತ್ರ : ಈ ಮೆಟ್ಟಿಲಿಗೆ ಅಧಿದೇವತೆ “ತ್ರಿಸಂಧ್ಯಾದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸಾಲ ಪಡೆದಾಗ ಬಂದಿರುವ ಪಾಪಗಳು ದೂರವಾಗುತ್ತವೆ.ಹತ್ತನೇ ಮೆಟ್ಟಿಲು ಕಿವಿ : ಈ ಮೆಟ್ಟಿಲಿಗೆ ಅಧಿದೇವತೆ “ಮುಕ್ತಿಗೆಹೀನ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಆಶ್ರಮ ಧರ್ಮ ಪುಣ್ಯ ಫಲ ದೊರೆಯುತ್ತದೆ.ಹನ್ನೊಂದನೇ ಮೆಟ್ಟಿಲು ಮೂಗು : ಈ ಮೆಟ್ಟಿಲಿಗೆ ಅಧಿದೇವತೆ “ಅರ್ಥಮಾತ್ರ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಅಕಾಲ ಮೃತ್ಯು ಭಯ ಇರುವುದಿಲ್ಲ.

Image result for sabarimala ayyappa temple 18 steps

ಹನ್ನೆರಡನೇ ಮೆಟ್ಟಿಲು ನಾಲಿಗೆ : ಈ ಮೆಟ್ಟಿಲಿಗೆ ಅಧಿದೇವತೆ “ಚಿದಾನಂದ ದೇವಿ ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಇಷ್ಟದೇವತಾ ದರ್ಶನ ಲಭಿಸುತ್ತದೆ.ಹದಿಮೂರನೇ ಮೆಟ್ಟಿಲು ಸ್ಪರ್ಶ : ಈ ಮೆಟ್ಟಿಲಿಗೆ ಅಧಿದೇವತೆ “ಭವಗ್ನಿ ದೇವಿ”ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದುರಾಭ್ಯಾಸಗಳು ದೂರವಾಗುತ್ತದೆ.ಹದಿನಾಲ್ಕನೆ ಮೆಟ್ಟಿಲು ಸತ್ವ : ಈ ಮೆಟ್ಟಿಲಿಗೆ ಅಧಿದೇವತೆ “ಭಯನಾಶಿನಿ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಸ್ತ್ರೀಯರ ಮೇಲೆ ಗೌರವ ಹೆಚ್ಚಾಗುತ್ತದೆ.ಹದಿನೈದನೇ ಮೆಟ್ಟಿಲು ತಮಸ್ಸು  : ಈ ಮೆಟ್ಟಿಲಿಗೆ ಅಧಿದೇವತೆ “ವೇದತ್ರಯೂ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಆಹಾರ ಶುದ್ಧಿ ಮೋಕ್ಷ ಪ್ರಾಪ್ತಿಯಾಗುತ್ತದೆ.ಹದಿನಾರನೇ ಮೆಟ್ಟಿಲು ರಜಸ್ಸು : ಈ ಮೆಟ್ಟಿಲಿಗೆ ತುಂಬಾ ಅಧಿದೇವತೆ “ಪರಾ ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದೇಹಬಲ ದೊರೆಯುತ್ತದೆ.ಹದಿನೇಳನೇ ಮೆಟ್ಟಿಲು ವಿದ್ಯೆ : ಈ ಮೆಟ್ಟಿಲಿಗೆ ಅದಿದೇವತೆ “ಅನಂತಾ  ದೇವಿ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ದೀರ್ಘವಾದ ಕಾಯಿಲೆ ನಾಶವಾಗುತ್ತದೆ.ಹದಿನೆಂಟನೇ ಮೆಟ್ಟಿಲು ಅವಿದ್ಯೆ  : ಈ ಮೆಟ್ಟಿಲಿಗೆ ಅಧಿದೇವತೆ “ಜ್ಞಾನ ಮಂಜರಿ ದೇವಿ ” ಈ ಮೆಟ್ಟಿಲನ್ನು ಸ್ಪರ್ಶಿಸುವುದರಿಂದ ಯಜ್ಞದಿಂದ ಮಾಡಿದ ಪುಣ್ಯಫಲ ,ಆರ್ಥಿಕ ಸ್ಥಿರತೆ ದೊರೆಯುತ್ತದೆ.

Related image

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=K9Gl1Z6vm5A


Like it? Share with your friends!

Comments 0

Your email address will not be published. Required fields are marked *

ಶಬರಿಮಲೆ ದೇವಸ್ಥಾನದ 18 ಮೆಟ್ಟಿಲುಗಳ ಮಹತ್ವ..!ಆಶ್ಚರ್ಯಪಡುವಂತಹ ವಿಚಾರಗಳು

log in

reset password

Back to
log in
Choose A Format
Gif
GIF format