ಸಾಮಾನ್ಯವಾಗಿ ಅನೇಕರು ಊಟ ಆದ ತಕ್ಷಣ ಮಲಗಿ ಬಿಡುತ್ತಾರೆ. ದಿನವಿಡೀ ಕೆಲಸ ಮಾಡಿ ಊಟ ಮಾಡಿದ್ರೆ ತಕ್ಷಣ ನಿದ್ರೆ ಬರುತ್ತೆ. ಆದರೆ ಊಟವಾದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು. ಹಾಗಾದರೆ ಊಟವಾದ ತಕ್ಷಣ ಯಾವ ಕೆಲಸಗಳನ್ನು ಮಾಡಬಾರದು ನಿಮಗೆ ಗೊತ್ತಾ..? ಊಟವಾದ ನಂತರ ಎರಡು ಗಂಟೆಗಳ ಕಾಲ ಚಹಾ ಸೇವಿಸಬೇಡಿ.
ಚಹಾದಲ್ಲಿ ಆಮ್ಲದ ಗುಣ ಹೆಚ್ಚಿರುತ್ತದೆ,ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಊಟ ಜೀರ್ಣವಾಗಲು ಕೆಲವು ಸಮಯ ಬೇಕಾಗುತ್ತದೆ. ಹಾಗಾಗಿ ಊಟವಾದ ತಕ್ಷ ಣ ಮಲಗಬಾರದು. ಹಾಗೆ ಮಾಡಿದ್ರೆ ಗ್ಯಾಸ್ ಹಾಗೂ ಕರುಳಿನ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಸಿಗರೇಟ್ ಆರೋಗ್ಯಕ್ಕೆ ಹಾನಿಕಾರ,
ಹೃದಯ ಹಾಗೂ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಊಟವಾದ ತಕ್ಷಣ ಧೂಮಪಾನ ಮಾಡಿದ್ರೆ,ಅಪಾಯ 10 ಪಟ್ಟು ಹೆಚ್ಚು ಎನ್ನುತ್ತಾರೆ ವೈದ್ಯರು. ಊಟವಾದ ತಕ್ಷಣ ಹಣ್ಣುಗಳನ್ನು ಸೇವಿಸಬಾರದು,ಅದರ ಪ್ರೋಟಿನ್ ದೇಹಕ್ಕೆ ಸರಿಯಾಗಿ ಸೇರುವುದಿಲ್ಲ. ಊಟವಾದ ಒಂದು ಗಂಟೆಯ ನಂತರ ಅಥವಾ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣು ಸೇವಿಸುವುದು ಉತ್ತಮ.
ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…
https://www.youtube.com/watch?v=wvg1LTUo2y8&feature=youtu.be
Comments 0