ನಯವಾದ ತುಟಿಗಳಿಗೆ ನೈಸರ್ಗಿಕ ಪರಿಹಾರ..!ನಾವು ಹೇಳುವುದನ್ನು ತಪ್ಪದೆ ಪಾಲಿಸಿ


ಸ್ವಲ್ಪ ದೇಶಿ ತುಪ್ಪವನ್ನು ತುಟಿಗಳಿಗೆ ಹಚ್ಚಿಕೊಂಡು ಹಾಗೇ ಬಿಟ್ಟು ಬಿಡಿ. ಎರಡು ಸಲ ಬಳಸಿದರೆ ನಯವಾದ ತುಟಿಗಳು ನಿಮ್ಮದಾಗುವುದು. 1/2 ಚಮಚ ಅರಳು ಸಕ್ಕರೆಗೆ ಒಂದು ಚಮಚದಷ್ಟು ರೋಸ್ ವಾಟರ್ ಹಾಕಿ. ಈ ಮಿಶ್ರಣವನ್ನು ತುಟಿಗಳಿಗೆ. ಕೆಲವು ನಿಮಿಷ ಬಳಿಕ ನೀರಿನಿಂದ ತೊಳೆಯಿರಿ. ದಿನದಲ್ಲಿ 3-4 ಬಳಸಿದರೆ ತುಟಿಗಳು ಮೃದುವಾಗುವುದು. ದಾಳಿಂಬೆ ಜ್ಯೂಸ್ ನಲ್ಲಿ ಹತ್ತಿ ಉಂಡೆಯನ್ನು ಅದ್ದಿಕೊಂಡು ಅದನ್ನು ತುಟಿಗಳಿಗೆ ಹಚ್ಚಿ.ಅರ್ಧ ಗಂಟೆ ಕಾಲ ಇದನ್ನು ಹಾಗೇ ಬಿಟ್ಟು ಬಳಿಕ ನೀರಿನಿಂದ ತೊಳೆಯಿರಿ. ಒಂದು ಸಲ ಬಳಸಿಕೊಂಡರೆ ಸುಂದರ ತುಟಿಗಳು ನಿಮ್ಮದಾಗುವುದು. ತಣ್ಣಗಿನ ಹಾಲನ್ನು ತುಟಿಗಳಿಗೆ ಸರಿಯಾಗಿ ಉಜ್ಜಿಕೊಳ್ಳಿ.

Image result for lips

15 ನಿಮಿಷ ಕಾಲ ಇದು ಹಾಗೆ ಇರಲಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ಗಡುಸಾಗಿರುವ ತುಟಿಗಳಿಗೆ ದಿನದಲ್ಲಿ ಎರಡು ಸಲ ಇದನ್ನು ಬಳಸಬಹುದು. ಒಂದು ತುಂಡು ಬೀಟ್ ರೂಟ್ ಕತ್ತರಿಸಿಕೊಂಡು ಅದನ್ನು ತುಟಿಗಳಿಗೆ ಉಜ್ಜಿಕೊಳ್ಳಿ. ಕೆಲವು ನಿಮಿಷ ಕಾಲ ಹೀಗೆ ಮಾಡಿ ಬಳಿಕ ನೀರಿನಿಂದ ತೊಳೆಯಿರಿ. ನಯವಾದ ತುಟಿಗಳನ್ನು ಪಡೆಯಬೇಕೆಂದು ಬಯಸಿದರೆ ನೀವು ದಿನದಲ್ಲಿ 2-3 ಸಲ ಇದನ್ನು ಬಳಸಬೇಕು. ಸ್ವಲ್ಪ ಜೇನುತುಪ್ಪ ತೆಗೆದುಕೊಂಡು ಅದನ್ನು ತುಟಿಗಳಿಗೆ ಸರಿಯಾಗಿ ಹಚ್ಚಿಕೊಳ್ಳಿ. ಹತ್ತು ನಿಮಿಷ ಕಾಲ ನೀವು ಇದನ್ನು ಹಾಗೆ ಬಿಡಿ. ಇದರ ಬಳಿಕ ನೀರಿನಿಂದ ತೊಳೆಯಿರಿ. ಬಳಿಕ ತುಟಿಯ ಮಾಲಾಮ್ ಹಚ್ಚಿಕೊಳ್ಳಿ. 3-4 ಹನಿ ಬಾದಾಮಿ ಎಣ್ಣೆಯನ್ನು ತುಟಿಗಳಿಗೆ ಹಚ್ಚಿಕೊಂಡು ರಾತ್ರಿಯಿಡೀ ಹಾಗೆ ಬಿಟ್ಟು ಬಿಡಿ. ಮರುದಿನ ಬೆಳಿಗ್ಗೆ ಅದನ್ನು ತೊಳೆಯಿರಿ. ಮಗುವಿನಂತಹ ಮೃದುವಾದ ತುಟಿಗಳು ನಿಮ್ಮದಾಗುವುದು.

Image result for lips

ಅಂಗೈ ಮೇಲೆ ಆಲಿವ್ ತೈಲವನ್ನು ಸ್ವಲ್ಪ ಹಾಕಿಕೊಂಡು ಬಳಿಕ ಬೆರಳಿನಿಂದ ಅದನ್ನು ತುಟಿಗಳಿಗೆ ಹಚ್ಚಿ. ದಿನದಲ್ಲಿ 3-4 ಸಲ ಬಳಸಿದರೆ ಅದರಿಂದ ಹೆಚ್ಚಿನ ಫಲಿತಾಂಶ ಪಡೆಯಬಹುದು. ಅಲೋವೆರಾ ಎಲೆಯಿಂದ ಲೋಳೆ ತೆಗೆದುಕೊಂಡು ಅದನ್ನು ತುಟಿಗಳಿಗೆ ಹಚ್ಚಿಕೊಳ್ಳಿ. ಅರ್ಧ ಗಂಟೆ ಕಾಲ ಇದು ಹಾಗೇ ಒಣಗಲಿ ಮತ್ತು ಬಳಿಕ ನೀರಿನಿಂದ ತೊಳೆಯಿರಿ. ನಿಯಮಿತವಾಗಿ ಬಳಸಿದರೆ ಒಳ್ಳೆಯ ಫಲಿತಾಂಶ ಸಿಗುವುದು.

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

https://www.youtube.com/watch?v=92nwXZ2wmGA


Like it? Share with your friends!

Comments 0

Your email address will not be published. Required fields are marked *

ನಯವಾದ ತುಟಿಗಳಿಗೆ ನೈಸರ್ಗಿಕ ಪರಿಹಾರ..!ನಾವು ಹೇಳುವುದನ್ನು ತಪ್ಪದೆ ಪಾಲಿಸಿ

log in

reset password

Back to
log in
Choose A Format
Gif
GIF format