ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಗ್ಯಾಸ್ ಟ್ರಬಲ್ ಮಾಯವಾಗುತ್ತದೆ..!


ಹೊಟ್ಟೆಯುಬ್ಬರ,ಹೊಟ್ಟೆನೋವು, ತೇಗು…ಇವೆಲ್ಲವೂ ನಮಗೆ ಕಿರಿಕಿರಿಯನ್ನು ಉಂಟುಮಾಡುತ್ತವೆ. ಹೊಟ್ಟೆಯಲ್ಲಿ ತಳಮಳ ಉಂಟಾದರೆ ಒಂದು ಕಡೆ ಕುಳಿತುಕೊಳ್ಳಲಾಗದ ಪರಿಸ್ಥಿತಿ ಉಂಟಾಗುತ್ತದೆ. ಕೋಪ ಬರುವುದು ,ಕಿರಿಕಿರಿ ಇವೆಲ್ಲವೂ ಗ್ಯಾಸ್ ಟ್ರಬಲ್ ಲಕ್ಷಣಗಳು. ಇಂತಹ ಗ್ಯಾಸ್ಟ್ರಿಕ್ ಸಮಸ್ಯೆಯ ನಿವಾರಣೆಗಾಗಿ ಆಯುರ್ವೇದದಲ್ಲಿ ಒಂದು ಒಳ್ಳೆಯ ಪರಿಹಾರವನ್ನು ಸೂಚಿಸಲಾಗಿದೆ.

ಅದರೊಂದಿಗೆ ಕೆಲವು ಸರಳ ನಿಯಮಗಳನ್ನು ಪಾಲಿಸಿದರೆ ಗ್ಯಾಸ್ ಟ್ರಬಲ್ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ಆ ನಿಯಮಗಳೆಂದರೆ 1. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಧ್ಯಾನ, ಯೋಗ ಇವುಗಳನ್ನು ನಿತ್ಯವೂ ತಪ್ಪದೆ ಮಾಡಬೇಕು. 2. ಪ್ರತಿದಿನ ಕನಿಷ್ಠ ಅರ್ಧ ಗಂಟೆ ಸಮಯ ವ್ಯಾಯಾಮ ಮಾಡಬೇಕು. 3. ನಾರಿನಾಂಶ ಅಧಿಕವಾಗಿರುವ ತಾಜಾ ತರಕಾರಿಗಳನ್ನು ಹೆಚ್ಚಾಗಿ ಸೇವಿಸಬೇಕು. 4. ಟೀ ಕಾಫಿ ಸೇವನೆಯನ್ನು ತ್ಯಜಿಸಬೇಕು, ಮಸಾಲೆ ಪದಾರ್ಥಗಳು, ಕರಿದ ತಿಂಡಿಗಳು, ಫಾಸ್ಟ್ ಫುಡ್ ಮದ್ಯಪಾನ , ಧೂಮಪಾನ ತ್ಯಜಿಸಬೇಕು. 5. ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು.

Image result for gas trouble

ಸಾಕಷ್ಟು ನೀರು ಕುಡಿಯಬೇಕು. 6. ಉಪ್ಪಿನಕಾಯಿ ಹಲವು ಬಗೆಯ ತುಕ್ಕುಗಳನ್ನು ತಿನ್ನುವುದನ್ನು ಬಿಡಬೇಕು. ಗ್ಯಾಸ್ ಸಮಸ್ಯೆಯಿಂದ ಮುಕ್ತಿ ಪಡೆಯಲು. ಶುಂಠಿ ಚೂರ್ಣ ಹಾಗೂ ಬೆಲ್ಲ ಸಾಲುಗಳಲ್ಲಿ ತೆಗೆದುಕೊಂಡು ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು ನಂತರ ಬಿಸಿನೀರು ಸೇವಿಸಿದರೆ ಗ್ಯಾಸ್ ಟ್ರಬಲ್ ನಿಂದ ಮುಕ್ತಿ ಪಡೆಯುತ್ತೀರಿ. ದನಿಯಾ, ಶುಂಠಿ ಸಮ ಭಾಗಗಳಲ್ಲಿ ಚೂರ್ಣ ಮಾಡಿಟ್ಟುಕೊಂಡು ಪ್ರತಿದಿನ ಬೆಳಗ್ಗೆ ಹಾಗೂ ರಾತ್ರಿ ಊಟದ ನಂತರ ಬಿಸಿ ಬಿಸಿ ನೀರಿನೊಂದಿಗೆ ಸೇವಿಸಿದರೆ. ಹೊಟ್ಟೆಯಲ್ಲಿರುವ ಗ್ಯಾಸ್ ಮಾಯವಾಗಿ ಮಲ ವಿಸರ್ಜನೆ ಸುಲಭವಾಗುತ್ತದೆ. ಹಸಿ ಶುಂಠಿ ರಸವನ್ನು ಬೆಲ್ಲ ಸೇರಿಸಿ ಕುದಿಸಿ ಒಂದು ಚಮಚದಷ್ಟು ಸೇವಿಸಿದರೆ ಹೊಟ್ಟೆಯುಬ್ಬರ ಕಡಿಮೆಯಾಗುತ್ತದೆ

Image result for gas trouble

ನಿಮಗೆ ಬೇಡವಾದ ವಿಷ್ಯವೇನಾದರೂ ಇದ್ದರೆ ಹಾಗೆ ಅನವಶ್ಯ ಪದಗಳು ಬಳಿಸಿದ್ದರೆ ನಮಗೆ ಕಾಮೆಂಟ್ ಮೂಲಕ ತಿಳಿಸಿ ಆದಷ್ಟು ಬೇಗ ಈ ಪೋಸ್ಟ್ ತೆಗೆದು ಬಿಡುತ್ತೇವೆ…

source:-https://www.youtube.com/watch?v=YTf_uF6qRJI&feature=youtu.be


Like it? Share with your friends!

Comments 0

Your email address will not be published. Required fields are marked *

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನಿ ಗ್ಯಾಸ್ ಟ್ರಬಲ್ ಮಾಯವಾಗುತ್ತದೆ..!

log in

reset password

Back to
log in
Choose A Format
Gif
GIF format